Pages Menu
TwitterRssFacebook
Categories Menu

Posted by on Dec 2, 2012 in Captures, Jotter | 0 comments

ಮತ್ತೆ ಬಂತು ದೀಪಾವಳಿ

ಮತ್ತೆ ಬಂತು ದೀಪಾವಳಿ

DSC_2366.NEF

 
ದಿನವೂ ವಿದ್ಯುದ್ವೀಪಗಳನು
ಬೆಳಗಿಸಲು ಕೂರುತ್ತಿದ್ದ
ಕೈಗಳಿಗೆ ಹೊಸದು ಕೆಲಸ
ಇಂದು ದೀಪಾವಳಿ

DSC_2379.NEF

ಮಣ್ಣ ಹಣತೆ ಹುಡುಕಿ ತಂದೆ
ಬೆಳ್ಳಿ ಚುಕ್ಕಿ, ಬಣ್ಣದುಡುಗೆ
ಅಂದ ಕೊಟ್ಟು ಒಟ್ಟು ಮಾಡಿ
ಬತ್ತಿ ಹೊಸೆದು ಪೇರಿಸಿಟ್ಟೆ

DSC_2250.NEF


DSC_2235.NEF

ಬಣ್ಣದ ರಂಗೋಲೆ ಹಾಕಿ
ಅಲ್ಲೂ ದೀಪಗಳನು ಬಿಡಿಸಿ
ಮಣ್ಣ ಹಣತೆ ಕೂರಿಸಿಟ್ಟೆ
ಎಷ್ಟು ಚೆಂದವು

DSC_2263.NEF
DSC_2303.NEF

ಎಣ್ಣೆ ಸುರಿದು, ಒಪ್ಪ ಮಾಡಿ
ಎಲ್ಲ ಹಣತೆಗಳನು ಹಚ್ಚಿ
ಮನೆಯ ಅಂಗಳವನು
ಸಂಜೆ ಬೆಳಗಿ ಕುಳಿತಿಹೆ

DSC_2309.NEF
DSC_2306.NEF

ಅಡಗಿ ಕೂತ ಕತ್ತಲೆಯನು
ಅಡಗಿಸುತ್ತ ದೂರವಿಡಲು
ಮತ್ತೆ ಬಂತು ನೋಡು
ನಮ್ಮ ದೀಪಾವಳಿ…

DSC_2352.NEF

ಇತ್ತ ಮನೆಗೆ ಬೆಳಕಿನುಸಿರು
ಅತ್ತ ಹೊರಗೆ ಪಟಾಕಿ ಸಿಡಿಲು
ದಣಿದ ಮನಕೆ ಹೊಸದು ಹರಕೆ
ಖುಷಿಯ ನಾಳೆ ದಿನದ ಬಯಕೆ

DSC_2412.NEF

ಬೆಳಕ ಜೊತೆಗೆ ನಗೆಯ ಚೆಲ್ಲು
ಕೂಡಿ ಆಡಿ ಮರೆವ ಜಗವ
ಬೇಡದ ಭಯ ದೂರ ಒಗೆದು
ಹೊಸತು ಬಾಳು ಬೆಳಗಲಿ

DSC_2321.NEF

ಚಿತ್ರಗಳು: ಮಂಸೋರೆ
ಚುಟುಕುಗಳು: ಓಂ ಶಿವ ಪ್ರಕಾಶ್

Post a Reply

Your email address will not be published. Required fields are marked *